ನೂತನ ಪದಾಧಿಕಾರಿಗಳಿಂದ ಸಿಂಗಾರಗೊಂಡ ಸಿಂಗಪುರ ಕನ್ನಡ ಸಂಘ

ಸಿಂಗಪುರ, ಜೂ . ೨೭ : ಕನ್ನಡ ಸಂಘ(ಸಿಂಗಪುರ) ಸಿಂಗನ್ನಡಿಗರಿಗೆ ಸದಾ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುತ್ತಲೇ ಬಂದಿದೆ. ಮನೋರಂಜನಾ ಕಾರ್ಯಕ್ರಮಗಳ ಜೊತೆಗೊತೆಗೆ ಕನ್ನಡ ಕಲಿ, ಸಿಂಗಾರ ಔದ್ಯೋಗಿಕ ವೇದಿಕೆ, ಸಿಂಚನ ಸಾಹಿತ್ಯ ಸ್ಪರ್ಧೆಗಳಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನೂ ನಡೆಸುತ್ತಿದೆ.

ಕನ್ನಡ ಸಂಘ (ಸಿಂಗಪುರ)ದ  ೧೯ನೇ  ವಾರ್ಷಿಕ  ಮಹಾಸಭೆಯು ಇದೇ ೨೭ನೇ ಜೂನ್ ೨೦೧೫, ಶನಿವಾರದಂದು ಸಿಂಗಪುರದ SINDA ಸಭಾಗೃಹದಲ್ಲಿ ವಿಧ್ಯುಕ್ತವಾಗಿ ಜರುಗಿತು. ವಾರ್ಷಿಕ ಚಟುವಟಿಕೆಗಳ ವರದಿ, ಲೆಕ್ಕ ಪತ್ರ ಪರಿಶೋಧನೆ ಮತ್ತು ಇತರ ಔಪಚಾರಿಕ ಕಾರ್ಯಕಲಾಪದ ಜೊತೆ ೨೦೧೫-೨೦೧೭ ಸಾಲಿನ ಪದಾಧಿಕಾರಿಗಳ ನೇಮಕಾತಿ ಯಾವ ಅಡೆತಡೆಯಿಲ್ಲದೆ ಸುಸೂತ್ರವಾಗಿ ನೆರವೇರಿತು. ಎಂದಿನಂತೆ ಪದಾಧಿಕಾರಿಗಳು ಸರ್ವಾನುಮತದಿಂದ ಆಯ್ಕೆಗೊಂಡರು. ನೂತನ ಸಮಿತಿಯ ಪದಾಧಿಕಾರಿಗಳ ವಿವರ ಕೆಳಕಂಡತಿದೆ.
 
ಶ್ರೀ ವಿಜಯರಂಗ ಪ್ರಸಾದ್ – ಅಧ್ಯಕ್ಷರು 
ಶ್ರೀ ಸುರೇಶ ಭಟ್ಟ –  ಉಪಾಧ್ಯಕ್ಷರು 
ಶ್ರೀ ಕೆ. ಜೆ. ಶ್ರೀನಿವಾಸ್ – ಕಾರ್ಯದರ್ಶಿ 
ಶ್ರೀ ವೆಂಕಟೇಶ್ ಗದ್ದೆಮನೆ – ಸಹ ಕಾರ್ಯದರ್ಶಿ 
ಶ್ರೀಮತಿ ಸುಮನಾ ಹೆಬ್ಬಾರ್ – ಖಜಾಂಚಿ
 
ಸದಸ್ಯರು
ಶ್ರೀ ವೆಂಕಟ ರತ್ನಯ್ಯ
ಶ್ರೀ ಚಂದ್ರಶೇಖರ ಕೊಲಕಿ
ಶ್ರೀಮತಿ ನಿರ್ಮಲ ಗೌಡ
ಶ್ರೀಮತಿ – ರಶ್ಮಿ ಉದಯ್ ಕುಮಾರ್ 
ಶ್ರೀ ಸಮಂತ್ ಯಾದವ್ 
ಶ್ರೀಮತಿ ಸ್ನೇಹಲತಾ 
ಹಲವು ಯಶಸ್ವೀ ಕಾರ್ಯಕ್ರಮಗಳನ್ನು ನೀಡಿದ ೨೦೧೩-೨೦೧೫ರ ಕಾರ್ಯಕಾರಿ ಸಮಿತಿಯ ಅಧ್ಯಕ್ಷೆಯಾಗಿದ್ದ ಶ್ರೀಮತಿ ವಿಶಾಲಾಕ್ಷಿ ವೈದ್ಯ ಮತ್ತು ಅವರ ದಕ್ಷ ಕಾರ್ಯಕಾರಿ ಸಮಿತಿಗೆ ಸಿಂಗನ್ನಡಿಗರೆಲ್ಲರೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತಾ ನೂತನ ಕಾರ್ಯಕಾರಿ ಸಮಿತಿಯನ್ನು ಆದರದಿಂದ ಸ್ವಾಗತಿಸಿದ್ದಾರೆ. ನೂತನ ಸಮಿತಿಗೆ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ.
Written by: ಗಿರೀಶ್ ಜಮದಗ್ನಿ,